ಕಾಗೆ ಮಾಂಬಳ್ಳಿ( , ) ಭಾರತ,ಬರ್ಮಾ ಮತ್ತು ಮಲಯಗಳ ಅರಣ್ಯಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಒಂದು ಬಳ್ಳಿ ಸಸ್ಯ. == ಸಸ್ಯ ಶಾಸ್ತ್ರೀಯ ವರ್ಗೀಕರಣ == ಮೆನಿಸ್ಪರ್ಮೇಸೀ ಕುಟುಂಬಕ್ಕೆ ಸೇರಿದೆ.ಅನಾಮಿರ್ಟ ಕಾಕ್ಯುಲಸ್ ಎಂಬುದು ವೈಜ್ಞಾನಿಕ ಹೆಸರು.ಚಿಪ್ಪುಳ ಕೋಲು ಕನ್ನಡದ ಸಾಮಾನ್ಯ ಹೆಸರು.ಕಾಕಮಾರಿ ಎಂಬುದು ಸಂಸ್ಕ್ರತ ಭಾಷೆಯ ಹೆಸರು. == ಲಕ್ಷಣಗಳು == ಗಾಢ ಹಸಿರಿನ ಅಗಲವಾದ ಎಲೆ. ಸುಮಾರು ೧೦ ಸೆಂಟಿಮೀಟರ್ ದಪ್ಪದಷ್ಟು ಬೆಳೆಯುವ ಗಟ್ಟಿಯಾದ ಬಳ್ಳಿ.ಹಳದಿ ಮಿಶ್ರಿತ ಬಿಳಿ ಬಣ್ಣದ ಸಣ್ಣ ಹೂಗಳು.ನವಿರು ಸುವಾಸನೆ ಇದೆ. == ಔಷಧೀಯ ಗುಣಗಳು == ಇದರ ಕಾಯಿ ವಿಷಪೂರಿತವಾಗಿದೆ.ಸಾಂಪ್ರದಾಯಿಕ ಕ್ರಿಮಿನಾಶಕವಾಗಿ ಉಪಯೋಗದಲ್ಲಿದೆ.ಮೀನು ಹಿಡಿಯಲು ಇದರ ಬೀಜವನ್ನು ಉಪಯೋಗಿಸುವರು. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಚರ್ಮ ರೋಗಗಳಿಗೆ ಮತ್ತು ಕಫ ದೋಷಗಳಿಗೆ ಬೇಕಾದ ಔಷಧ ತಯಾರಿಯಲ್ಲಿ ಬಳಸುವರು.